Kannada Literature

For 2023 Attempt

Course Description

ಕನ್ನಡ ಸಾಹಿತ್ಯ ತರಗತಿಗಳು ೨೦೨೨

ಕನ್ನಡ ಸಾಹಿತ್ಯದ ಓದು ಎಂದರೆ ಅದೊಂದು ಚೇತೋಹಾರಿ ಪಯಣ. ಯುಪಿಎಸ್ಸಿ ಹಾದಿಯಲ್ಲಿ ಗುರಿ ಮುಟ್ಟುವ ತವಕದಲ್ಲಿರುವ ಅಭ್ಯರ್ಥಿಗಳು ಆಯ್ದುಕೊಳ್ಳಬಹುದಾದ ಅತ್ಯಂತ ಸೂಕ್ತ ಐಚ್ಛಿಕ ವಿಷಯ ಕನ್ನಡ ಸಾಹಿತ್ಯವೇ ಆಗಿರುತ್ತದೆ ಎನ್ನುವುದು ಅನುಭವಿಗಳ‌ ಮಾತು.

ಈ ಕನ್ನಡ ಸಾಹಿತ್ಯದ ಕಲಿಕೆಯ ಪಯಣವೇ ಒಂದು ಸೊಬಗಿನ ಚಾರಣ. ಚಂಪುವಿನ ಕಂಪು, ರಗಳೆಯ  ರೋಮಾಂಚಕ ಕಥನ, ವಚನದ ವಿಕ್ರಾಂತ  ಅನಿರ್ವಚನೀಯತೆ  ಮತ್ತು  ಸಾಂಗತ್ಯದ ಮಧುರ  ಸ್ವಪ್ನ‌ಲೋಕದಿಂದ  ಹೊಸತೊಂದು ಉದ್ಯಾನವನಕ್ಕೆ ಪ್ರವೇಶ: ಅದುವೇ ನವೋದಯದ ರಮ್ಯ ಚೈತ್ರ ಕಾಲ.

ಅಲ್ಲಿ ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿ, ಯಾರುಂಟು ಯಾರಿಲ್ಲ ?

ಕತೆ, ಕವನ, ಕಾದಂಬರಿ, ವಿಮರ್ಶೆ, ನೃತ್ಯ,  ನಾಟಕ ಏನುಂಟು ಏನಿಲ್ಲ ?

ಇಂತಹ ಅದ್ಭುತವಾದ ಕನ್ನಡ ಸಾಹಿತ್ಯದ ಸಂಪೂರ್ಣ ಕೋಚಿಂಗ್ ಅನ್ನು ಇದೇ ಪ್ರಪ್ರಥಮ ಬಾರಿಗೆ 'ಮ್ಯಾನಿಫೆಸ್ಟ್ ಐಎಎಸ್  ಅಕಾಡೆಮಿ'ಯಲ್ಲಿ  ಕೈಗೊಳ್ಳಲಿದ್ದೇವೆ.

'ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ' (JNU) ದೆಹಲಿ' ಯ ಕನ್ನಡ ಪೀಠದ ಸ್ಥಾಪಕರೂ, ವಿಶ್ರಾಂತ ಪ್ರಾಧ್ಯಾಪಕರೂ ಮತ್ತು ಪ್ರಸಕ್ತ 'ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್'ನ ರಾಷ್ಟ್ರೀಯ ಕೋ ಆರ್ಡಿನೇಟರ್ ಆಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆಯವರ ನೇತೃತ್ವದಲ್ಲಿ ಮತ್ತು ಅದಾಗಲೇ ಕನ್ನಡ ಸಾಹಿತ್ಯದ ಯಶಸ್ವಿ  ತರಬೇತಿದಾರರಾಗಿ ಪ್ರಸಿದ್ಧರಾಗಿರುವ ಶ್ರೀಮತಿ. ಆಯಿಶಾ ಯೂ.ಟಿ ರವರ ಸಹಯೋಗದಲ್ಲಿ ಇದೇ ಜುಲೈ 18 ರಿಂದ ನಮ್ಮ ತರಗತಿಗಳು ಪ್ರಾರಂಭವಾಗಲಿವೆ.

ಪ್ರೊ. ಪುರುಷೋತ್ತಮ ಬಿಳಿಮಲೆಯವರ ಪರಿಚಯ:

http://bilimale.blogspot.com/2018/06/cv-of-purushottama-bilimale.html

 

ಪ್ರೊ. ಪುರುಷೋತ್ತಮ ಬಿಳಿಮಲೆಯವರ ತರಗತಿಗಳ ತುಣುಕುಗಳು:

ಪಂಪನ ಕುರಿತು:

https://www.youtube.com/watch?v=q2Lp2QKsmMc

ಮಧ್ಯಕಾಲೀನ ಕನ್ನಡ ಸಾಹಿತ್ಯ ಕುರಿತು:

https://www.youtube.com/watch?v=svabWt5EivE

ಆಧುನಿಕ ಕನ್ನಡ ಸಾಹಿತ್ಯ ಕುರಿತು:

https://www.youtube.com/watch?v=TtSrGgdz5EI

 

ಕನಕದಾಸರ ಕುರಿತು ಶ್ರೀಮತಿ. ಆಯಿಶಾ ಯೂ.ಟಿ ರವರು:

https://www.youtube.com/watch?v=6av6c3Zoj14

ಈಗಾಗಲೇ ಯುಪಿಎಸ್ಸಿ ಐಚ್ಛಿಕ ಕನ್ನಡ  ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿಯಶಸ್ವಿ ಪರೀಕ್ಷಾ ಸರಣಿಗಳನ್ನು ನಡೆಸಿದ, ಹತ್ತು ವರುಷಗಳ ಸುದೀರ್ಘ ಅನುಭವವಿರುವ, ಶ್ರೀ ಮೃತ್ಯುಂಜಯ ಶಿ. ನಾವಲಗಟ್ಟಿಯವರ ಸಮರ್ಥ ನಿರ್ದೇಶನದೊಂದಿಗೆ ತರಗತಿಗಳು ನಡೆಯಲಿವೆ.

ಒಟ್ಟು ತರಗತಿಗಳು  ಸಂಪೂರ್ಣ ಸಿಲಬಸ್ ಅನ್ನು ಆಧರಿಸಿದ,‌ತ ಅತ್ಯುತ್ತಮ  ನೋಟ್ಸುಗಳು ಮತ್ತು ಕಾಲಕಾಲಕ್ಕೆ ಸಂಬಂಧಿಸಿದ ಪರೀಕ್ಷೆಗಳೊಂದಿಗೆ ತಂಡವು ಒಂದು ಸ್ವಯಂಪೂ ರ್ಣವಾದ ಕಲಿಕಾ ಕ್ರಮವನ್ನು ಅಳವಡಿಸಿಕೊಂಡಿದ್ದು ಅಭ್ಯರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಲು 'ಮ್ಯಾನಿಫೆಸ್ಟ್ ಲರ್ನಿಂಗ್ ಅಕಾಡೆಮಿಹರ್ಷಿಸುತ್ತದೆ.

ವಿದ್ಯಾರ್ಥಿಗಳ ಅನಿಸಿಕೆಗಳು:

https://youtu.be/WwBhwCekRdo

https://youtu.be/XywlpZ7w3Yo

https://youtu.be/4lCN1p6NZhw

Features

ನಾಗರಿಕ ಸೇವಾ ಪರೀಕ್ಷೆ ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಪುಸ್ತಕಗಳ ಪಟ್ಟಿ

 

 

ಪುಸ್ತಕದ ಶೀರ್ಷಿಕೆ

ಲೇಖಕರು

 

1

ಬೆಟ್ಟದ ಜೀವ

ಶಿವರಾಮ ಕಾರಂತ

 

ಮಾಧವಿ

ಅನುಪಮ ನಿರಂಜನ

 

3

ಒಡಲಾಳ

ದೇವನೂರು ಮಹಾದೇವ

 

ದೇವರು

ಎ ಎನ್ ಮೂರ್ತಿರಾವ್

 

5

ಸಣ್ಣ ಕತೆಗಳು

ಜಿ ಎಚ್ ನಾಯಕ್

 

ತುಘಲಕ್

ಗಿರೀಶ್ ಕಾರ್ನಾಡ್

 

7

ಶೂದ್ರ ತಪಸ್ವಿ

ಕುವೆಂಪು

 

ಹೊಸಗನ್ನಡ ಕವಿತೆ

ಜಿ ಎಚ್ ನಾಯಕ್ (ಆಯ್ದ ಕವಿತೆಗಳ ಜೆರಾಕ್ಸ್)

 

9

ಜಾನಪದ ಸ್ವರೂಪ

ಹಾ ಮಾ ನಾಯಕ್

 

೧೦

ಜನಪದ ಗೀತಾಂಜಲಿ

ದೇ. ಜ. ಗೌ.

 

11

ಜನಪದ ಕಥೆಗಳು

ಜೀ. ಎಂ. ಪರಮಶಿವಯ್ಯ

 

೧೨

ಬೀದಿ ಮಕ್ಕಳು ಬೆಳೆದೋ

ಕಾಳೇಗೌಡ ನಾಗವಾರ

 

13

ಸಾವಿರದ ಒಗಟುಗಳು

ಇಮ್ರಾಪುರ (ಮುನ್ನುಡಿ ಹಾಗೂ ಆಯ್ದ ಒಗಟುಗಳ ಜೆರಾಕ್ಸ್)

 

೧೪

ಪಂಪಭಾರತ ೧೨ನೇ ಮತ್ತು ೧೩ನೇ ಆಶ್ವಾಸ

ಜೆರಾಕ್ಸ್

 

15

ಪಂಪನ ಸಮಸ್ತ ಭಾರತ

ಎಲ್. ಬಸವರಾಜ

 

೧೬

ಕನ್ನಡ ಸಾಹಿತ್ಯ ಚರಿತ್ರೆ (ಪಂಪ, ನಾಗಚಂದ್ರ, ಜನ್ನ, ವಚನಕಾರರು, ಹರಿಹರ, ರಾಘವಾಂಕ, ಕುಮಾರವ್ಯಾಸ, ದಾಸರು, ರತ್ನಾಕರವರ್ಣಿ)

ತ. ಸು. ಶಾಮರಾಯ ಮತ್ತು ರಂ. ಶ್ರೀ. ಮುಗಳಿ

 

17

ವಡ್ಡಾರಾಧನೆ

ಟಿ. ಕೇಶವ ಭಟ್ಟ

 

೧೮

ವಚನ ಕಮ್ಮಟ

ಕೆ. ಮರುಳಸಿದ್ದಪ್ಪ

 

19

ನಂಬಿಯಣ್ಣನ ರಗಳೆ

ತೀ. ನಂ. ಶ್ರೀಕಂಠಯ್ಯ

 

೨೦

ಕರ್ಣ ಪರ್ವ

ಜೆರಾಕ್ಸ್

 

21

ಜನಪ್ರಿಯ ಕನಕ ಸಂಪುಟ

ದೇ. ಜ. ಗೌ.

 

೨೨

ಪುರಂದರದಾಸರ ಕೀರ್ತನೆಗಳು

ಯಾವುದೇ ಸಂಕ್ಷೀಪ್ತ ಪುಸ್ತಕ

 

23

ಭರತೇಶ ವೈಭವ (1-೧೦ ಸಂಧಿ)

ರತ್ನಾಕರವರ್ಣಿ

 

೨೪

ಕನ್ನಡ ಭಾಷೆಯ ಚರಿತ್ರೆ

ಎಂ. ಎಚ್. ಕೃಷ್ಣಯ್ಯ

 

25

ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ

ಎಲ್. ಎಸ್. ಶೇಷಗಿರಿರಾವ್

 

೨೬

ಭಾರತೀಯ ಕಾವ್ಯ ಮೀಮಾಂಸೆ

ತೀ. ನಂ. ಶ್ರೀಕಂಠಯ್ಯ

 

27

ಕರ್ನಾಟಕ ಸಂಸ್ಕೃತಿ

ವಿಕಿಪೀಡಿಯಾ

 

೨೮

ಸಾಹಿತ್ಯ ವಿಮರ್ಶೆ

ಸಿ. ಎನ್. ರಾಮಚಂದ್ರನ್

 

29

ಸಮಗ್ರ ಗದ್ಯ 1 ಮತ್ತು ೨

ಜಿ. ಎಸ್. ಶಿವರುದ್ರಪ್ಪ

 

೩೦

ಕಾವ್ಯಾರ್ಥ ಚಿಂತನ

ಜಿ. ಎಸ್. ಶಿವರುದ್ರಪ್ಪ

 

31

ಕನ್ನಡ ಸಾಹಿತ್ಯ ಸಂಗಾತಿ

ಕೀರ್ತಿನಾಥ ಕುರ್ತುಕೋಟಿ

 

೩೨

ಕನ್ನಡ ರತ್ನಕೋಶ

ಕನ್ನಡ ಸಾಹಿತ್ಯ ಪರಿಷತ್

 

 

ಮೇಲಿನ ವಿಷಯಗಳಿಗೆ ಸಂಬಂಧಿಸಿದ ಮೈಸೂರು ವಿಶ್ವವಿದ್ಯಾಲಯ ಎಂ. ಎ. ನೋಟ್ಸ್ ಜೆರಾಕ್ಸ್

 
 

Rs.35000/-

Rs.35000/-